ಭಾರತ-ವಿಂಡೀಸ್ ಮೊದಲ ಏಕದಿನ ಮಳೆಯಿಂದಾಗಿ ವಾಶ್ ಔಟ್

ಗಯಾನ| Krishnaveni K| Last Modified ಶುಕ್ರವಾರ, 9 ಆಗಸ್ಟ್ 2019 (09:32 IST)
ಗಯಾನ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಿನ್ನೆ ನಡೆಯಬೇಕಿದ್ದ ಮೊದಲ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ನಿನ್ನೆ ರಾತ್ರಿ 7 ಗಂಟೆಗೆ ನಡೆಯಬೇಕಿದ್ದ ಪಂದ್ಯ ವಾಶ್ ಔಟ್ ಆಗಿದೆ.

 
ಎರಡು ಗಂಟೆ ತಡವಾಗಿ ಪಂದ್ಯ ಆರಂಭವಾಯಿತು. ಆಗ ಎರಡೂ ತಂಡಗಳಿಗೆ ಓವರ್ ಕಡಿತ ಮಾಡಿ 43 ಓವರ್ ಗಳ ಆಟ ನಿರ್ಧರಿಸಲಾಯಿತು. ಆದರೆ ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ 5.4 ಓವರ್ ಆಡಿ 9 ರನ್ ಗಳಿಸಿದ್ದಾಗ ಮತ್ತೆ ಮಳೆ ಮುಂದುವರಿಯಿತು.
 
ಮತ್ತೆ ಒಂದು ಗಂಟೆ ಬಳಿಕ ಆಟ ನಡೆಸಲು ತೀರ್ಮಾನಿಸಿ ಪಂದ್ಯವನ್ನು 34 ಓವರ್ ಗಳಿಗೆ ಕಡಿತಗೊಳಿಸಲಾಯಿತು. ಆದರೆ ವಿಂಡೀಸ್ 54 ರನ್ ಗಳಿಗೆ 1 ವಿಕೆಟ್ ಕಳೆದುಕೊಂಡಿದ್ದಾಗ ಮತ್ತೆ ಮಳೆ ಕಾಟ ಶುರುವಾಯಿತು. ಹೀಗಾಗಿ ಪಂದ್ಯ ರದ್ದುಗೊಳಿಸಲಾಯಿತು.
ಇದರಲ್ಲಿ ಇನ್ನಷ್ಟು ಓದಿ :