ಲಂಡನ್: ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಪಂದ್ಯಗಳಷ್ಟೂ ಕ್ರಿಕೆಟ್ ಅಭಿಮಾನಿಗಳಿಗೆ ರೋಚಕ, ಸ್ಮರಣೀಯ ನೆನಪುಗಳನ್ನು ಕೊಟ್ಟಿದೆ. ಇವುಗಳ ಪೈಕಿ ಐದು ಪಂದ್ಯಗಳನ್ನು ನೆನಪು ಮಾಡಿಕೊಳ್ಳೋಣ. ಶಾರ್ಜಾ ಕಪ್ ಫೈನಲ್ 1986 ರ ಶಾರ್ಜಾ ಕಪ್ ಫೈನಲ್ ಪಂದ್ಯವನ್ನು ಇಂದಿಗೂ ಜನ ಸ್ಮರಿಸಿಕೊಳ್ಳುತ್ತಾರೆ. ಆ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಕಪ್ ಗೆಲ್ಲಲು ಕೊನೆಯ ಬಾಲ್ ನಲ್ಲಿ 4 ರನ್ ಬೇಕಾಗಿತ್ತು. ಚೇತನ್ ಶರ್ಮಾ ಕೈಯಲ್ಲಿ ಬಾಲ್ ಇತ್ತು. ಜಾವೆದ್ ಮಿಯಾಂದಾದ್