ನವದೆಹಲಿ: ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ನವಂಬರ್ 3 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಟಿ20 ಪಂದ್ಯವಾಡಬೇಕಿದೆ. ಆದರೆ ಈ ಪಂದ್ಯ ನಡೆಸುವುದಕ್ಕೆ ಇದೀಗ ಹಲವೆಡೆಯಿಂದ ಅಪಸ್ವರ ಕೇಳಿಬಂದಿದೆ.ಮೊದಲನೆಯದಾಗಿ ಇಲ್ಲಿ ಪಂದ್ಯ ನಡೆಸಲು ಕಳಪೆ ಮಟ್ಟದ ವಾತಾವರಣ ಕಾರಣ. ವಾಯು ಮಾಲಿನ್ಯದಿಂದಾಗಿ ಹೊಗೆಯುಕ್ತ ವಾತಾವರಣವಿದೆ. ಇಂತಹ ಸಂದರ್ಭದಲ್ಲಿ ಇಲ್ಲಿ ಪಂದ್ಯ ಆಯೋಜಿಸುವುದು ಆಟಗಾರರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎನ್ನುವುದು ಪರಿಸರವಾದಿಗಳು, ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್, ಮಾಜಿ