ಮುಂಬೈ: ಟೀಂ ಇಂಡಿಯಾ ಏಕದಿನ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಿದ್ದು ಯಾಕೆ ಎಂಬ ಪ್ರಶ್ನೆಗೆ ಸ್ವತಃ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಉತ್ತರ ನೀಡಿದ್ದಾರೆ.ಕೊಹ್ಲಿಯನ್ನು ಪದಚ್ಯುತಗೊಳಿಸಿದ ಮೇಲೆ ಅವರ ಅಭಿಮಾನಿಗಳು ಗಂಗೂಲಿ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದರು. ಐದು ವರ್ಷ ನಾಯಕರಾಗಿದ್ದವರಿಗೆ ಈ ರೀತಿ ಅವಮಾನ ಮಾಡಿದ್ದು ಸರಿಯಲ್ಲ ಎಂದಿದ್ದರು. ಇದರ ಬಗ್ಗೆ ಇದೀಗ ಗಂಗೂಲಿ ಬಾಯ್ಬಿಟ್ಟಿದ್ದಾರೆ.‘ಕೊಹ್ಲಿ ಟಿ20 ನಾಯಕತ್ವದಿಂದ ಕೆಳಗಿಳಿಯುತ್ತೇನೆ ಎಂದಾಗ ಬೇಡ ಎಂದು ಮನವಿ ಮಾಡಿದ್ದೆವು.