Widgets Magazine

ಹೊಗೆಯನ್ನೂ ಲೆಕ್ಕಿಸದೇ ಆಡಿದ್ದಕ್ಕೆ ಭಾರತ-ಬಾಂಗ್ಲಾ ಕ್ರಿಕೆಟಿಗರಿಗೆ ಥ್ಯಾಂಕ್ಸ್ ಹೇಳಿದ ಗಂಗೂಲಿ

ನವದೆಹಲಿ| Krishnaveni K| Last Modified ಸೋಮವಾರ, 4 ನವೆಂಬರ್ 2019 (09:49 IST)
ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶ ನಡುವೆ ಮೊದಲ ಟಿ20 ಪಂದ್ಯದಲ್ಲಿ ದೆಹಲಿಯ ಹೊಗೆಯುಕ್ತ ವಾತಾವರಣದಲ್ಲೂ ಆಡಿದ್ದಕ್ಕೆ ಉಭಯ ತಂಡಗಳ ಕ್ರಿಕೆಟಿಗರಿಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಧನ್ಯವಾದ ಸಲ್ಲಿಸಿದ್ದಾರೆ.

 
ಇಡೀ ದೆಹಲಿಯೇ ದಟ್ಟ ಹೊಗೆಯ ವಾತಾವರಣದಿಂದಾಗಿ ಉಸಿರಾಡಲೂ ಕಷ್ಟಪಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಆಡುವುದು ನಿಜಕ್ಕೂ ಕಷ್ಟವೇ. ಹಾಗಿದ್ದರೂ ಯಾವುದನ್ನೂ ಲೆಕ್ಕಿಸದೇ ಆಡಿದ್ದಕ್ಕೆ ಉಭಯ ತಂಡದ ಆಟಗಾರರಿಗೆ ಗಂಗೂಲಿ ಟ್ವಿಟರ್ ಮೂಲಕ ಥ್ಯಾಂಕ್ಸ್ ಹೇಳಿದ್ದಾರೆ.
 
‘ಇಂತಹ ಕಠಿಣ ಪರಿಸ್ಥಿತಿಯಲ್ಲಿ ಆಡಿದ್ದಕ್ಕೆ ಟೀಂ ಇಂಡಿಯಾ, ರೋಹಿತ್ ಶರ್ಮಾ ಮತ್ತು ಬಾಂಗ್ಲಾ ಕ್ರಿಕೆಟಿಗರಿಗೆ ಧನ್ಯವಾದಗಳು. ಬಾಂಗ್ಲಾ ನಿಜಕ್ಕೂ ಚೆನ್ನಾಗಿ ಆಡಿತು’ ಎಂದು ಗಂಗೂಲಿ ಧನ್ಯವಾದ ಸಲ್ಲಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :