ನವದೆಹಲಿ: ಟೀಂ ಇಂಡಿಯಾದಿಂದ ಹಿರಿಯ ವಿಕೆಟ್ ಕೀಪರ್ ಧೋನಿ ನಿವೃತ್ತಿಯಾಗಬೇಕೋ ಬೇಡವೋ ಎಂಬ ಚರ್ಚೆಗಳ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ತಮ್ಮ ಅಭಿಪ್ರಾಯ ಹೇಳಿದ್ದಾರೆ.ಧೋನಿ ನಿವೃತ್ತಿಯಾಗುವುದು ಬೇಡ ಎನ್ನುವರರಿಗೆ ಗಂಭೀರ್ ಟಾಂಗ್ ಕೊಟ್ಟಿದ್ದಾರೆ. ಧೋನಿ ಮತ್ತು ಕೊಹ್ಲಿ ಮೇಲೆ ಗಂಭೀರ್ ಆಗಾಗ ಕಿಡಿ ಕಾರುತ್ತಲೇ ಇರುತ್ತಾರೆ. ಇದೀಗ ಧೋನಿಗಿಂತ ದೇಶವೇ ದೊಡ್ಡದು ಎನ್ನುವ ಮೂಲಕ ಧೋನಿ ನಿವೃತ್ತಿಯಾಗಲಿ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ನಿವೃತ್ತಿ ಎನ್ನುವುದು ಪ್ರತಿಯೊಬ್ಬ ಆಟಗಾರನ ವೈಯಕ್ತಿಕ ನಿರ್ಧಾರ.