ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್`ನಲ್ಲಿ ಉಗ್ರರ ಗುಂಡೇಟಿನಿಂದ ಹುತಾತ್ಮರಾದ ಎಎಸ್ಐ ಅಬ್ದುಲ್ ರಶೀದ್ ಮಗಳು ಜೋಹ್ರಾ ಕಣ್ಣಿರು ಹೊರೆಸಲು ಕ್ರಿಕೆಟಿಗ ಗೌತಮ್ ಗಂಭೀರ್ ಮುಂದಾಗಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಗೌತಮ್ ಗಂಭೀರ್ ಹುತಾತ್ಮ ಪೊಲೀಸ್ ಅಧಿಕಾರಿಗೆ ಗೌರವ ಸಲ್ಲಿಸಿದ್ದು, ಮಗಳು ಜೋಹ್ರಾಗೆ ಶಿಕ್ಷಣಕ್ಕೆ ನೆರವು ನೀಡುವ ಭರವಸೆ ನೀಡಿದ್ದಾರೆ. ಮೊದಲ ಟ್ವೀಟ್`ನಲ್ಲಿ ``ಜೋಹ್ರಾ ಲಾಲಿ ಹಾಡಿ ನಿನ್ನನ್ನ ಮಲಗಿಸಲು ನನ್ನಿಂದ ಸಾಧ್ಯವಾಗದಿರಬಹುದು. ಆದರೆ, ಮೇಲೆದ್ದು ನಿನ್ನ