Photo Courtesy: Twitterಗಯಾನ: ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿ ಸರಣಿ ಆಡುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಗಯಾನದಲ್ಲಿರುವ ಭಾರತೀಯ ರಾಯಭಾರ ಕಚೇರಿ ಔತಣಕೂಟ ಏರ್ಪಡಿಸಿದೆ.ಗಯಾನದಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗರನ್ನು ರಾಯಭಾರ ಕಚೇರಿಗೆ ಆಹ್ವಾನಿಸಲಾಗಿತ್ತು. ಗಯಾನದಲ್ಲಿರುವ ಭಾರತೀಯ ರಾಯಭಾರಿ ಡಾ.ಕೆ.ಜೆ. ಶ್ರೀನಿವಾಸ ಭಾರತೀಯ ಕ್ರಿಕೆಟಿಗರಿಗೆ ಔತಣಕೂಟ ಏರ್ಪಡಿಸಿದ್ದರು.ಈ ಔತಣ ಕೂಟದಲ್ಲಿ ಕೋಚ್ ರಾಹುಲ್ ದ್ರಾವಿಡ್, ನಾಯಕ ಹಾರ್ದಿಕ್ ಪಾಂಡ್ಯ ಸೇರಿದಂತೆ ಭಾರತ ತಂಡದ ಕ್ರಿಕೆಟಿಗರು, ಸಹಾಯಕ ಸಿಬ್ಬಂದಿಗಳೆಲ್ಲರೂ ಭಾಗಿಯಾಗಿದ್ದರು.