ಇಂಧೋರ್: ಕೊನೆಗೂ ಗುಜರಾತ್ ಅಂದುಕೊಂಡಿದ್ದನ್ನು ಸಾಧಿಸಿದೆ. ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಮುಂಬೈ ತಂಡವನ್ನು 5 ವಿಕೆಟ್ ಗಳಿಂದ ಸೋಲಿಸಿ ರಣಜಿ ಕ್ರಿಕೆಟ್ ಕಿರೀಟ ಮುಡಿಗೇರಿಸಿಕೊಂಡಿದೆ.ನಾಯಕನ ಆಟವಾಡಿದ ಪಾರ್ಥಿವ್ ಪಟೇಲ್ 143 ರನ್ ಗಳಿಸಿ ಮನ್ ಪ್ರೀತ್ ಜುನೇಜಾ ಜತೆ ತಂಡವನ್ನು ದಡ ಮುಟ್ಟಿಸಲು ಸಹಾಯ ಮಾಡಿದರು. ಇದರೊಂದಿಗೆ ಕಳೆದ 26 ವರ್ಷಗಳಿಂದ ಇದೇ ಮೊದಲ ಬಾರಿಗೆ ಫೈನಲ್ ತಲುಪಿಯೂ ರಣಜಿ ಗೆಲ್ಲಲು ಮುಂಬೈ ವಿಫಲವಾಯಿತು. ಇದರೊಂದಿಗೆ ಗುಜರಾತ್ ರಣಜಿ