ದಿ ಓವಲ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದ ಮೂರನೇ ದಿನ ಭೋಜನ ವಿರಾಮದ ವೇಳೆಗೆ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿದೆ.ನಿನ್ನೆ 6 ವಿಕೆಟ್ ಕಳೆದುಕೊಂಡು 174 ಕ್ಕೆ ದಿನದಾಟ ಮುಗಿಸಿದ್ದ ಭಾರತಕ್ಕೆ ಇಂದು ಕೆಲ ಹೊತ್ತು ಹನುಮ ವಿಹಾರಿ ಮತ್ತು ರವೀಂದ್ರ ಜಡೇಜಾ ಉತ್ತಮ ಜತೆಯಾಟವಾಡಿ ಚೇತರಿಕೆ ನೀಡಿದರು. ಚೊಚ್ಚಲ ಪಂದ್ಯದಲ್ಲಿ (56) ಅರ್ಧಶತಕ ಗಳಿಸಿದ ಹನುಮ ವಿಹಾರಿ