ಮುಂಬೈ: ಕ್ರಿಕೆಟ್ ದೇವರು ಎಂದೇ ಕರೆಯಿಸಿಕೊಳ್ಳುವ ಸಚಿನ್ ತೆಂಡುಲ್ಕರ್ ಇಂದು 47 ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಕೊರೋನಾ ಕಾರಣದಿಂದ ಸಚಿನ್ ಈ ಬಾರಿ ಬರ್ತ್ ಡೇ ಆಚರಿಸಿಕೊಳ್ಳದೇ ಇರಲು ನಿರ್ಧರಿಸಿದ್ದಾರೆ.ಆದರೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು, ಕ್ರಿಕೆಟಿಗರು, ಸ್ನೇಹಿತರು ಕ್ರಿಕೆಟ್ ದಿಗ್ಗಜನಿಗೆ ಹುಟ್ಟುಹಬ್ಬದ ಶುಭಾಷಯ ಕೋರುತ್ತಿದ್ದಾರೆ.ಟೆಸ್ಟ್, ಏಕದಿನ ಪಂದ್ಯಗಳಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನೇ ಮಾಡಿದ್ದ ಸಚಿನ್ ಐಪಿಎಲ್ ಆಡಿದ್ದು ಕಡಿಮೆ. ಅವರು ಮೊದಲ ಬಾರಿಗೆ ಐಪಿಎಲ್ ಆಡುವಾಗ 35 ವರ್ಷವಾಗಿತ್ತು. ಆದರೂ