ಬೆಂಗಳೂರು: ಐಪಿಎಲ್ 2022 ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಚುಕ್ಕಾಣಿ ಹಿಡಿಯುವವರು ಯಾರು ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.ವಿರಾಟ್ ಕೊಹ್ಲಿಯ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಗೆ ಆರ್ ಸಿಬಿ ಮ್ಯಾನೇಜ್ ಮೆಂಟ್ ತಲೆಕೆಡಿಸಿಕೊಂಡು ಕೂತಿದೆ. ಇದುವರೆಗೆ ಸೂಕ್ತ ನಾಯಕನನ್ನು ಹುಡುಕಾಡಲು ಆರ್ ಸಿಬಿ ವಿಫಲವಾಗಿದೆ. ಈ ನಡುವೆ ಈ ಒಂದು ಋತುವಿಗಾದರೂ ಕೊಹ್ಲಿಯೇ ಮುಂದುವರಿಯಲಿ ಎಂಬ ಮಾತುಗಳೂ ಕೇಳಿಬರುತ್ತಿವೆ. ಅದಕ್ಕೆ ಕೊಹ್ಲಿ ಒಪ್ಪುತ್ತಾರೋ, ಇಲ್ಲವೋ ಬೇರೆ