Widgets Magazine

ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಈಗ ಸಿಕ್ಸ್ ಪ್ಯಾಕ್ ಹೀರೋ!

ಮುಂಬೈ| Krishnaveni K| Last Modified ಬುಧವಾರ, 4 ಮಾರ್ಚ್ 2020 (09:32 IST)
ಮುಂಬೈ: ಗಾಯದಿಂದಾಗಿ ಬಹಳ ದಿನಗಳಿಂದ ಕ್ರಿಕೆಟ್ ನಿಂದ ದೂರವುಳಿದಿದ್ದ ಆಲ್ ರೌಂಡರ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಫೋಟೋ ಒಂದು ವೈರಲ್ ಆಗಿದೆ.
 

ತಮ್ಮ ಹಾಲಿ ಫೋಟೋವನ್ನು ಪ್ರಕಟಿಸಿರುವ ಹಾರ್ದಿಕ್ ಸಿಕ್ಸ್ ಪ್ಯಾಕ್ ಪ್ರದರ್ಶನ ಮಾಡಿದ್ದಾರೆ. ಆ ಮೂಲಕ ಬಿಡುವಿನ ವೇಳೆಯಲ್ಲಿ ತಮ್ಮ ದೇಹವನ್ನು ಹೇಗೆ ಹುರಿಗೊಳಿಸಿದ್ದೇನೆಂದು ತೋರಿಸಿಕೊಂಡಿದ್ದಾರೆ. ಇನ್ನೇನು ಐಪಿಎಲ್ ಆರಂಭವಾಗಲಿದೆ. ಅದಕ್ಕೂ ಮೊದಲು ಹಾರ್ದಿಕ್ ಭರ್ಜರಿಯಾಗಿಯೇ ತಯಾರಾಗಿದ್ದಾರೆ.
 
ಡಿವೈ ಪಾಟೀಲ್ ಟಿ20 ಕಪ್ ಪಂದ್ಯದಲ್ಲಿ 39 ಎಸೆತಗಳಲ್ಲಿ ಶತಕ ಸಿಡಿಸಿ ತಾವು ಕಮ್ ಬ್ಯಾಕ್ ಮಾಡಿರುವುದಾಗಿ ಸಾರಿದ್ದಾರೆ. ಮುಂಬೈ ಇಂಡಿಯನ್ಸ್ ಪರ ಆಡಲಿರುವ ಹಾರ್ದಿಕ್ ಅದಕ್ಕೂ ಮೊದಲು ಫಾರ್ಮ್ ಸಾಬೀತುಪಡಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :