Photo Courtesy: Twitterಕೇಪ್ ಟೌನ್: ಆಸ್ಟ್ರೇಲಿಯಾ ವಿರುದ್ಧ ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್ ನಲ್ಲಿ ಸೋತ ಬಳಿಕ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಭಾವುಕರಾಗಿದ್ದರು.ಸೋಲಿನ ಬಳಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡುವಾಗ ಹರ್ಮನ್ ಭಾವುಕರಾಗಿದ್ದರು. ಕನ್ನಡಕ ಹಾಕಿಕೊಂಡೇ ಮಾತನಾಡಲು ಬಂದಿದ್ದರು.ಈ ಬಗ್ಗೆ ಪ್ರಶ್ನಿಸಿದಾಗ ನನ್ನ ದೇಶ ನನ್ನ ಕಣ್ಣೀರು ನೋಡಲು ನಾನು ಇಷ್ಟಪಡಲ್ಲ. ನನ್ನ ದೇಶಕ್ಕೆ ಮತ್ತೆ ಯಾವತ್ತೂ ಹೀಗೆ ಸೋಲಾಗಲು ಬಿಡಲ್ಲ’ ಎಂದಿದ್ದಾರೆ.