ಬರ್ಮಿಂಗ್ ಹ್ಯಾಮ್: ಆಸ್ಟ್ರೇಲಿಯಾ ವಿರುದ್ಧ ಕಾಮನ್ ವೆಲ್ತ್ ಕ್ರಿಕೆಟ್ ಫೈನಲ್ಸ್ ನಲ್ಲಿ ಕೊನೆಯ ಕ್ಷಣದಲ್ಲಿ ಸೋತ ಬಳಿಕ ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ತೀವ್ರ ಬೇಸರದಲ್ಲಿದ್ದರು.ಪದಕ ಸಮಾರಂಭದ ವೇಳೆಯೂ ಹರ್ಮನ್ ಮುಖ ಕಳೆಗುಂದಿತ್ತು. ಚಿನ್ನ ಗೆಲ್ಲಲಾಗಲಿಲ್ಲ ಎಂಬ ಬೇಸರ ಎದ್ದು ಕಾಣುತ್ತಿತ್ತು. ಇದೇ ಹತಾಶೆಯಲ್ಲಿ ಅವರು ಪಂದ್ಯದ ಬಳಿಕ ಮಾತನಾಡಿದ್ದಾರೆ.ಕೊನೆಯವರೆಗೂ ಚಿನ್ನ ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿದ್ದೆವು. ಅವರು ಚೆನ್ನಾಗಿ ಆಡುತ್ತಿದ್ದರೂ ನಾವು ಕೊನೆಯವರೆಗೂ ಬಿಟ್ಟುಕೊಡಲ್ಲ ಎಂಬ ಮನೋಭಾವದಲ್ಲಿದ್ದೆವು.