ಸಿಡ್ನಿ: ಸೆಮಿಫೈನಲ್ ಪಂದ್ಯ ಮಳೆಯಿಂದಾಗಿ ರದ್ದಾದ ಬೆನ್ನಲ್ಲೇ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಫೈನಲ್ ತಲುಪಿದರೂ ಭಾರತೀಯ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಗೆ ಒಂದು ವಿಚಾರಕ್ಕೆ ತಕರಾರು ಇದೆ.ಸೆಮಿಫೈನಲ್ ರದ್ದಾಗಿ ಭಾರತ ಸುಲಭವಾಗಿ ಫೈನಲ್ ಪ್ರವೇಶಿಸಿದ್ದಕ್ಕೆ ಅಭಿಮಾನಿಗಳು ಖುಷಿಯಾಗಿದ್ದರೆ ಭಾರತೀಯ ನಾಯಕಿಗೆ ಮಾತ್ರ ಆಡಿ ಗೆದ್ದೇ ಫೈನಲ್ ತಲುಪಬೇಕಿತ್ತು ಎಂಬ ಕನಸಿತ್ತು.ಒಂದು ವೇಳೆ ಮೀಸಲು ದಿನ ಎಂದಿದ್ದರೆ ಆ ದಿನ ಪಂದ್ಯವಾಡಬಹುದಿತ್ತು. ಆದರೆ ಈ ವಿಶ್ವಕಪ್