ದುಬೈ: ದ.ಆಫ್ರಿಕಾ ಮತ್ತು ಪಾಕಿಸ್ತಾನ ನಡುವೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಫ್ರಿಕಾ ಬ್ಯಾಟ್ಸ್ ಮನ್ ಹಶೀಮ್ ಆಮ್ಲಾ ಶತಕ ದಾಖಲಿಸಿ ವೈಯಕ್ತಿಕವಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಾಖಲೆ ಮುರಿದರು.ಆದರೆ ಆಮ್ಲಾ ದಾಖಲೆ ಮುರಿದರೂ ಅವರನ್ನು ಯಾರೂ ಹೊಗಳಲಿಲ್ಲ, ಬದಲಾಗಿ ಟೀಕಿಸುತ್ತಿದ್ದಾರೆ. ಅದಕ್ಕೆ ಕಾರಣ, ಗೆಲುವಿಗೆ ಕೇವಲ 262 ರನ್ ಬೇಕಾಗಿದ್ದರೂ ತೀರಾ ನಿಧಾನಗತಿಯ ಇನಿಂಗ್ಸ್ ಆಡಿದ ಆಮ್ಲಾ 120 ಬಾಲ್ ಗಳಲ್ಲಿ 108 ರನ್ ಗಳಿಸಿದರು.