ನವದೆಹಲಿ: ಪತಿ, ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಮೇಲೆ ಗೃಹ ಹಿಂಸೆ ಪ್ರಕರಣ ಜತೆಗೆ ಹಲವು ಗಂಭೀರ ಆರೋಪಗಳನ್ನು ಹೊರಿಸಿದ ಮೇಲೂ ಪತ್ನಿ ಹಸೀನ್ ಜಹಾನ್ ಇದೀಗ ಅಪಘಾತದಲ್ಲಿ ಗಾಯಗೊಂಡಿರುವ ಶಮಿ ಭೇಟಿಗೆ ಟಿಕೆಟ್ ಖರೀದಿಸಿದ್ದಾರಂತೆ!ಮೊಹಮ್ಮದ್ ಶಮಿ ಮೊನ್ನೆ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ಇದೀಗ ಪತಿ ಭೇಟಿಗಾಗಿ ಹಸೀನ್ ತಮಗೆ ಹಾಗೂ ತಮ್ಮ ಪುತ್ರಿಗೆ ಓಪನ್ ಟಿಕೆಟ್ ಖರೀದಿಸಿದ್ದಾರಂತೆ. ಆದರೆ ಹಸೀನ್ ಗೆ ಇದೀಗ ಶಮಿ ಎಲ್ಲಿದ್ದಾರೆಂಬ ಮಾಹಿತಿಯಿಲ್ಲ.