ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್,ಗವಾಸ್ಕರ್ ಟೆಸ್ಟ್ ಪಂದ್ಯವಾಡಲು ದೆಹಲಿಯಲ್ಲಿರುವ ಟೀಂ ಇಂಡಿಯಾಗೆ ಹೋಟೆಲ್ ಸಮಸ್ಯೆ ಎದುರಾಗಿದೆ.ಟೀಂ ಇಂಡಿಯಾ ದೆಹಲಿಗೆ ಬಂದಾಗಲೆಲ್ಲಾ ಐಟಿಸಿ ಮಯೂರ ಅಥವಾ ತಾಜ್ ಹೋಟೆಲ್ ನಲ್ಲಿ ತಂಗುತ್ತದೆ. ಆದರೆ ಈ ಬಾರಿ ಜಿ20 ಶೃಂಗ ಸಭೆ ಮತ್ತು ಮದುವೆ ಸೀಸನ್ ಜೋರಾಗಿರುವುದರಿಂದ ಈ ಎರಡೂ ಹೋಟೆಲ್ ಗಳೂ ಭರ್ತಿಯಾಗಿವೆ. ಹೀಗಾಗಿ ಈ ಹೋಟೆಲ್ ನಿಂದ ಅನಿವಾರ್ಯವಾಗಿ ಟೀಂ ಇಂಡಿಯಾ ಹೊರನಡೆಯಬೇಕಾಯಿತು.ಇದೀಗ ಟೀಂ ಇಂಡಿಯಾ ಹೋಟೆಲ್ ಲೀಲಾಗೆ ಸ್ಥಳಾಂತರವಾಗಿದೆ.