ಪರ್ತ್: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಖಾಸಗಿ ಕೊಠಡಿಯ ವಿಡಿಯೋ ವೈರಲ್ ಮಾಡಿದ್ದ ಹೋಟೆಲ್ ಸಿಬ್ಬಂದಿಯನ್ನು ವಜಾ ಮಾಡಲಾಗಿದೆ.ಪರ್ತ್ ನ ಕ್ರೌನ್ ಪರ್ತ್ ಹೋಟೆಲ್ ನಲ್ಲಿ ಘಟನೆ ನಡೆದಿತ್ತು. ಟಿ20 ವಿಶ್ವಕಪ್ ಆಡಲು ಇಲ್ಲಿ ವಾಸ್ತವ್ಯವಿರುವ ಕೊಹ್ಲಿಯ ಖಾಸಗಿ ಕೊಠಡಿಯೊಳಗೆ ಅನುಮತಿಯಿಲ್ಲದೇ ಪ್ರವೇಶಿಸಿದ ಹೋಟೆಲ್ ಸಿಬ್ಬಂದಿಯೊಬ್ಬರು ವಿಡಿಯೋ ಮಾಡಿದ್ದಲ್ಲದೆ, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿಯಬಿಟ್ಟಿದ್ದರು.ಇದು ಕೊಹ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಇದು ನನ್ನ ಖಾಸಗಿತನಕ್ಕೆ ಆದ ಧಕ್ಕೆ. ನಾವು ಮನರಂಜನೆಯ