ನವದೆಹಲಿ: ಮದುವೆಯಾದಾಗಿನಿಂದ ಯಾಕೋ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾಗೆ ಜತೆಯಾಗಿರುವ ಅವಕಾಶವೇ ಸಿಕ್ಕಿರಲಿಲ್ಲ. ಇಬ್ಬರೂ ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿ. ಆದರೆ ಇದೀಗ ಅನುಷ್ಕಾ ಪತಿಗಾಗಿ ಬಿಡುವು ಮಾಡಿಕೊಂಡಿದ್ದಾರೆ.ಸದ್ಯಕ್ಕೆ ಅನುಷ್ಕಾ ವರುಣ್ ಧವನ್ ಜತೆಗೆ ಸೂಯಿ ದಾಗ್ ಸಿನಿಮಾ ಶೂಟಿಂಗ್ ಗಾಗಿ ಭೋಪಾಲ್ ನಲ್ಲಿದ್ದಾರೆ. ವಿರಾಟ್ ಏನೋ ಕ್ರಿಕೆಟ್ ನಿಂದ ಕೆಲವು ದಿನಗಳ ವಿರಾಮದಲ್ಲಿದ್ದಾರೆ. ಸದ್ಯಕ್ಕೆ ದೆಹಲಿಯಲ್ಲಿರುವ ವಿರಾಟ್ ಜತೆಗೂಡಲು ಅನುಷ್ಕಾ ಎರಡು ದಿನ ತಮಗೆ ಸಿಕ್ಕ ಬಿಡುವಿನ