ನವದೆಹಲಿ: ಒಂದು ಕಾಲದಲ್ಲಿ ವಿಶ್ವದ ಎಲ್ಲಾ ತಂಡಗಳಿಗೂ ಕಬ್ಬಿಣದ ಕಡಲೆಯಾಗಿದ್ದ ಆಸ್ಟ್ರೇಲಿಯಾ ತಂಡ ಕಳೆದ ಕೆಲವು ವರ್ಷಗಳಲ್ಲಿ ಸಾಮಾನ್ಯ ತಂಡವಾಗಿಬಿಟ್ಟಿತ್ತು.ಹಾಗಿದ್ದರೂ ಭಾರತದಂತಹ ಉಪಖಂಡದ ಪಿಚ್ ನಲ್ಲಿ ಆಸ್ಟ್ರೇಲಿಯಾಕ್ಕೆ ದೊಡ್ಡ ಮಟ್ಟಿಗಿನ ಯಶಸ್ಸು ಸಿಗುತ್ತಿರಲಿಲ್ಲ. ಆದರೆ ದುರ್ಬಲವಾಗಿದ್ದ ಆಸ್ಟ್ರೇಲಿಯಾ ಇದೀಗ ದಿಡೀರ್ ಆಗಿ ಭಾರತದಲ್ಲಿ ಪುಟಿದೇಳಲು ಕಾರಣವೇನು ಗೊತ್ತಾ?ಇತ್ತ ಟೀಂ ಇಂಡಿಯಾದಂತಹ ಉಪಖಂಡದ ತಂಡಗಳು ಇತ್ತೀಚೆಗೆ ಸ್ಪಿನ್ ಬಿಟ್ಟು, ವೇಗದ ಪಿಚ್ ಗಳಲ್ಲಿ ಆಡಲು ಸಿದ್ಧವಾಗುತ್ತಿದ್ದರೆ, ಅತ್ತ ಆಸ್ಟ್ರೇಲಿಯಾದಂತಹ ತಂಡಗಳು ಸ್ಪಿನ್