ದಾಖಲೆಯ 1009 ರನ್ ಸಿಡಿಸಿದ ಪ್ರಣವ್ ಧನವಾಡೆ ಸಾಧನೆ ಹೇಗಿದೆ?

ನವದೆಹಲಿ, ಶನಿವಾರ, 9 ಜುಲೈ 2016 (19:37 IST)

ಪ್ರಣವ್ ಧನವಾಡೆ 2016ರನ್ನು ನಂಬಲಾಗದ ರೀತಿಯಲ್ಲಿ ಆರಂಭಿಸಿ ದಾಖಲೆಯ 1009 ರನ್ ಸ್ಕೋರ್ ಮಾಡಿದ್ದ. 16 ವರ್ಷದ ಬಾಲಕನ  ರೋಚಕ ಕಥೆಯನ್ನು ಭಾರತ ಮತ್ತು ಅಂತಾರಾಷ್ಟ್ರೀಯ ಮಾಧ್ಯಮವು ಬಹಳ ಆಳವಾಗಿ ಪ್ರಚಾರ ಮಾಡಿತ್ತು.
 
 ಮುಂಬೈ ಕ್ರಿಕೆಟ್ ತಂಡದಲ್ಲಿ ಪ್ರಣವ್‌ನನ್ನು ಭವಿಷ್ಯದ ಕ್ರಿಕೆಟ್ ಪಟು ಎಂದೇ ಬಣ್ಣಿಸಲಾಯಿತು ಮತ್ತು ಬಹು ಪ್ರಶಸ್ತಿ ಸಮಾರಂಭಗಳಲ್ಲಿ ಶ್ಲಾಘಿಸಲಾಯಿತು. ಆದರೆ ಎಚ್‌ಡಿ ಭಂಡಾರಿ ಕಪ್ ಐತಿಹಾಸಿಕ ಇನ್ನಿಂಗ್ಸ್‌ ಬಳಿಕ ಯುವಕನ ಸಾಧನೆಗಳು ಕುಸಿಯುತ್ತಾ ಬಂತು. ಪ್ರಣವ್ ಸೆಮಿಫೈನಲ್‌ನಲ್ಲಿ 74 ಮತ್ತು 156 ರನ್ ಸ್ಕೋರ್ ಮಾಡಿದರು ಮತ್ತು ಕಪ್ ಫೈನಲ್‌ನಲ್ಲಿ 40 ಮತ್ತು 20 ರನ್‌ಗಳನ್ನು ಸ್ಕೋರ್ ಮಾಡಿದ್ದ.
 
ಮುಂಬೈ ಕ್ರಿಕೆಟ್ ಸಂಸ್ಥೆಯು ಯು-19 ಸಂಭವನೀಯರ ಶಿಬಿರದ ತರಬೇತಿಗೆ ಪ್ರಣವ್‌ನನ್ನು ಆಯ್ಕೆ ಮಾಡದೇ ಕಡೆಗಣಿಸಿತು. ಬಲಗೈ ಆಟಗಾರ ಥಾನೆ ಪ್ರೀಮಿಯರ್ ಲೀಗ್ ಮತ್ತು ಥೋಸಾರ್ ಟ್ರೋಫಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಲು ವಿಫಲವಾದ.
ವೋರ್ಲಿ ಕ್ರಿಕೆಟ್ ಕ್ಲಬ್ ಜತೆ 16 ದಿನಗಳ ಟ್ರಿಪ್‌ನಲ್ಲಿ ಪಾಲ್ಗೊಳ್ಳಲು ಅವನೀಗ ಇಂಗ್ಲೆಂಡ್‌ಗೆ ತೆರಳಲಿದ್ದು, ತಂಡವು ಲೈಸೆಸ್ಟರ್‌ಶೈರ್‌ನಲ್ಲಿ 9 ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಪ್ರಣವ್ ಈ ಪ್ರವಾಸದಲ್ಲಿ ಮುಂಬೈ ಆಯ್ಕೆದಾರರ ಗಮನ ಸೆಳೆಯಲು ಉತ್ತಮ ಪ್ರದರ್ಶನ ನೀಡಲು ನಿರ್ಧರಿಸಿದ್ದಾನೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಸಸೆಕ್ಸ್ ವಿರುದ್ಧ ಪಾಕಿಸ್ತಾನ: ಅಜರ್ ಅಲಿ ಶತಕ, ಪಾಕ್ 363ಕ್ಕೆ 5

ಲಂಡನ್: ಮುಂದಿನ ವಾರ ಇಂಗ್ಲೆಂಡ್ ವಿರುದ್ಧ ನಡೆಯುವ ಮೊದಲ ಟೆಸ್ಟ್‌ಗೆ ಮುನ್ನ ಪಾಕಿಸ್ತಾನದ ಅಜರ್ ಅಲಿ ಅವರ ...

news

ಹಾಕಿ ಟೀಂ ನಾಯಕಿ ರೀಟು ರಾಣಿ ಒಲಿಂಪಿಕ್ ತಂಡದಿಂದ ಡ್ರಾಪ್

ನವದೆಹಲಿ: ಭಾರತದ ಮಹಿಳಾ ಹಾಕಿ ಟೀಂ ನಾಯಕಿ ರೀಟು ರಾಣಿ ಅವರನ್ನು ರಿಯೊ ಒಲಿಂಪಿಕ್ಸ್‌ಗೆ ತೆರಳುವ ತಂಡದಿಂದ ...

news

ಫ್ರಾನ್ಸ್ ವಿರುದ್ಧ ಸೋಲುಗಳ ದಾಖಲೆ ಮುರಿಯಲು ರೊನಾಲ್ಡೊಗೆ ಸುವರ್ಣಾವಕಾಶ

ಫ್ರಾನ್ಸ್ ವಿರುದ್ಧದ ಪಂದ್ಯಗಳಲ್ಲಿ ನಿರಾಶಾದಾಯಕ ದಾಖಲೆಗೆ ತೆರೆಎಳೆಯುವ ಸುವರ್ಣವಾಕಾಶ ಯೂರೊ 2016 ಫೈನಲ್ ...

news

ನ್ಯೂಜಿಲೆಂಡ್ ವಿರುದ್ಧ ಟೂರ್ನಿಯಲ್ಲಿ ಧೋನಿಗೆ 3 ದಾಖಲೆ ಮುರಿಯುವ ಅವಕಾಶ

ಭಾರತದ ಸೀಮಿತ ಓವರುಗಳ ನಾಯಕ ಎಂಎಸ್ ಧೋನಿ ಅವರಿಗೆ ಗುರುವಾರ 35 ವರ್ಷ ತುಂಬಿದೆ. ವಿರಾಟ್ ಕೊಹ್ಲಿ ಅವರ ...