ಮುಂಬೈ: 2011 ರ ಏಕದಿನ ವಿಶ್ವಕಪ್ ಗೆಲುವಿನ ಮಾಸ್ಟರ್ ಮೈಂಡ್ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡುಲ್ಕರ್ ಎಂದು ಸಹ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಬಹಿರಂಗಪಡಿಸಿದ್ದಾರೆ.ಫೈನಲ್ ಪಂದ್ಯದಲ್ಲಿ ವಿರಾಟ್ ಮತ್ತು ಗೌತಮ್ ಬ್ಯಾಟಿಂಗ್ ಮಾಡುತ್ತಿದ್ದರು. ಫೈನಲ್ ನಲ್ಲಿ ಧೋನಿ ಯುವರಾಜ್ ಗಿಂತ ಮೊದಲು ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದಿದ್ದರು. ಈ ನಿರ್ಧಾರದ ಹಿಂದಿನ ಕಾರಣ ಸಚಿನ್ ತೆಂಡುಲ್ಕರ್ ಎಂದು ಸೆಹ್ವಾಗ್ ಹೇಳಿದ್ದಾರೆ.ಅದೇ ಮೊದಲ ಬಾರಿಗೆ ಸಚಿನ್ ನೇರವಾಗಿ ಧೋನಿಗೆ ತಮ್ಮ ಸಲಹೆ ಕೊಟ್ಟಿದ್ದರು.