ನಾನು ವಿಂಟೇಜ್‌ ವೈನ್‌ನಂತೆ, ದಿನಗಳೆದಂತೆ ರುಚಿ ಕೊಡುತ್ತೇನೆ: ಧೋನಿ

ನಾರ್ಥ್ ಸೌಂಡ್(ಆಂಟಿಗುವಾ)| Rajesh patil| Last Updated: ಶನಿವಾರ, 1 ಜುಲೈ 2017 (14:21 IST)
ನಾನು ವಿಂಟೇಜ್ ವೈನ್‌ನಂತೆ ವರ್ಷಗಳುರುಳಿದಂತೆ ಉತ್ತಮ ರುಚಿಯನ್ನು ನೀಡುತ್ತೇನೆ ಎಂದು ಖ್ಯಾತ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.
ಇತ್ತೀಚೆಗೆ ಟೀಂ ಇಂಡಿಯಾದ ಆರಂಭಿಕ ಮೂವರು ಆಟಗಾರರು ಉತ್ತಮ ಪ್ರದರ್ಶನ ನೀಡಿದ ನಂತರ ಇತರ ಆಟಗಾರರಿಗೆ ಹೆಚ್ಚಿನ ಅವಕಾಶ ದೊರೆಯುವುದಿಲ್ಲ. ಆದರೆ, ನನಗೆ 79 ಎಸೆತಗಳಲ್ಲಿ 78 ರನ್‌ಗಳನ್ನು ಸ್ಕೋರ್ ಮಾಡಿ ಅಜೇಯವಾಗಿ ಉಳಿದು ತಂಡದ ಮೊತ್ತವನ್ನು ಹೆಚ್ಚಿಸಿದಕ್ಕೆ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.ವಯಸ್ಸಿನೊಂದಿಗೆ ಬ್ಯಾಟಿಂಗ್ ವೇಗವನ್ನು ಹೆಚ್ಚಿಸಿಕೊಂಡಿದ್ದು ಹೇಗೆ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ವೈನ್‌ನಂತೆ. ಕಠಿಣವಾದ ಟ್ರ್ಯಾಕ್‌‍ನಲ್ಲಿ ಹೆಚ್ಚು ರನ್ ಗಳಿಸಿರುವುದು ತೃಪ್ತಿ ತಂದಿದೆ ಎಂದರು.
"ಕಳೆದ ಒಂದೂವರೆ ವರ್ಷಗಳಲ್ಲಿ ನಮ್ಮ ಅಗ್ರ ಕ್ರಮಾಂಕದ ಬ್ಯಾಚ್ಸ್‌ಮೆನ್‌ಗಳು

ಹೆಚ್ಚಿನ ರನ್‌ಗಳನ್ನು ಪೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ದರಿಂದ, ಇತರ ಕ್ರಿಕೆಟಿಗರಿಗೆ ಇಂತಹ ಸದಾವಕಾಶನ್ನು ಉಪಯೋಗಿಸಿ ಹೆಚ್ಚಿನ ರನ್‌ಗಳಿಸಲು ಪ್ರೇರೆಪಿಸುತ್ತದೆ ಎಂದು ಮಹೇಂದ್ರ ಸಿಂಗ್ ಧೋನಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.


ಇದರಲ್ಲಿ ಇನ್ನಷ್ಟು ಓದಿ :