ಮುಂಬೈ: ಈ ಬಾರಿ ಮಹಿಳೆಯರಿಗೆ ಏಕದಿನ ವಿಶ್ವಕಪ್ ನಡೆಯಲ್ಲ. ಇದಕ್ಕೆ ಕಾರಣ ತಯಾರಿ ನಡೆಸಲು ಸಮಯವಿಲ್ಲ ಎಂದು ಐಸಿಸಿ ತಿಳಿಸಿದೆ.2021 ರ ಫೆಬ್ರವರಿಯಲ್ಲಿ ನ್ಯೂಜಿಲೆಂಡ್ ನಲ್ಲಿ ನಡೆಯಬೇಕಿದ್ದ ಐಸಿಸಿ ಮಹಿಳಾ ವಿಶ್ವಕಪ್ ಏಕದಿನ ಕ್ರಿಕೆಟ್ ಟೂರ್ನಿಯನ್ನು ರದ್ದುಮಾಡಿದೆ. ಕೊರೋನಾದಿಂದಾಗಿ ತಯಾರಿ ನಡೆಸಲು ಸಮಯವಿಲ್ಲ. ಇದೇ ಕಾರಣಕ್ಕೆ ಟೂರ್ನಮೆಂಟ್ ರದ್ದುಗೊಳಿಸುತ್ತಿರುವುದಾಗಿ ಐಸಿಸಿ ಸಿಇಒ ಆಂಡ್ರಿಯಾ ನೆಲ್ಸನ್ ಹೇಳಿದ್ದಾರೆ.ಈ ಮೊದಲು ಜುಲೈನಲ್ಲಿ ಟೂರ್ನಮೆಂಟ್ ನಡೆಯುವುದೆಂದು ನಿಗದಿಯಾಗಿತ್ತು. ಆದರೆ ಕೊರೋನಾ ಕಾರಣದಿಂದ ಫೆಬ್ರವರಿಗೆ ಮುಂದೂಡಲಾಗಿತ್ತು.