ಮುಂಬೈ: 161 ಕೋಟಿ ರೂ. ನಮಗೆ ಪಾವತಿ ಮಾಡದೇ ಇದ್ದರೆ 2023 ರ ವಿಶ್ವಕಪ್ ಆತಿಥ್ಯವೂ ಸಿಗಲ್ಲ ಎಂದು ಐಸಿಸಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಎಚ್ಚರಿಕೆ ನೀಡಿದೆ.2016 ಟಿ 20 ವಿಶ್ವಕಪ್ ಆತಿಥ್ಯ ವಹಿಸಿಕೊಂಡಿದ್ದಾಗ ಭಾರತ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ 161 ಕೋಟಿ ರೂ. ಪಾವತಿ ಮಾಡಲಾಗಿತ್ತು. ಆ ಮೊತ್ತವನ್ನು ನಮಗೆ ಬಿಸಿಸಿಐ ಪಾವತಿ ಮಾಡಬೇಕು. ಇಲ್ಲದೇ ಹೋದರೆ 2023 ರ ಏಕದಿನ ವಿಶ್ವಕಪ್ ಆತಿಥ್ಯ ನಿಮಗೆ ಸಿಗಲ್ಲ