ದುಬೈ: ಕ್ರಿಕೆಟಿಗರು ಆಗಾಗ ಮೈದಾನದಲ್ಲಿ ತಲೆಗೆ ಪೆಟ್ಟು ಮಾಡಿಕೊಳ್ಳುತ್ತಿರುವುದು ಇತ್ತೀಚೆಗಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಐಸಿಸಿ ಆಟಗಾರರಿಗೆ ಹೊಸ ಹೆಲ್ಮೆಟ್ ನೀತಿ ಜಾರಿ ಮಾಡಲು ಉದ್ದೇಶಿಸಿದೆ.ಈ ನಿಯಮವನ್ನು ಮುರಿದವರಿಗೆ ತಕ್ಕ ದಂಡ ವಿಧಿಸಲಿದೆ. ಇನ್ನು ಮುಂದೆ ಕ್ರಿಕೆಟಿಗರು ಧರಿಸುವ ಹೆಲ್ಮೆಟ್ ಬ್ರಿಟಿಷ್ ಗುಣಮಟ್ಟ ಬಿಎಸ್ 7928:2013 ರನ್ನು ತಲುಪಬೇಕು. ಇದನ್ನು ಈಗಾಗಲೇ ಇಂಗ್ಲೆಂಡ್ ಕ್ರಿಕೆಟಿಗರು ಪಾಲಿಸುತ್ತಿದ್ದಾರೆ.ಒಂದು ವೇಳೆ ಈ ಗುಣಮಟ್ಟದ ಹೆಲ್ಮೆಟ್ ಧರಿಸದೇ ಕಣಕ್ಕಿಳಿದರೆ ತಕ್ಕ ಬೆಲೆ