ದುಬೈ: ನಿರೀಕ್ಷೆಯಂತೇ ಐಸಿಸಿ ನಿನ್ನೆ ನಡೆದ ಸಭೆಯಲ್ಲಿ ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಕ್ರಿಕೆಟ್ ಕೂಟವನ್ನು ಮುಂದೂಡಿಕೆ ಮಾಡಿದ್ದು, ಇದರಿಂದ ಐಪಿಎಲ್ ಅಭಿಮಾನಿಗಳು ಖುಷಿಯಾಗಿದ್ದಾರೆ.ಟಿ20 ವಿಶ್ವಕಪ್ ನಡೆಯಬೇಕಿದ್ದ ಸಮಯದಲ್ಲಿ ಐಪಿಎಲ್ ನಡೆಸಲು ಇದರಿಂದ ಬಿಸಿಸಿಐ ಹಾದಿ ಸುಗಮವಾಗಲಿದೆ. ಕೊರೋನಾ ಕಾರಣದಿಂದಾಗಿ ಟಿ20 ವಿಶ್ವಕಪ್ ಮುಂದೂಡುತ್ತಿರುವುದಾಗಿ ಐಸಿಸಿ ತಿಳಿಸಿದೆ.ಇದರ ಜತೆಗೆ ಮುಂಬರುವ ಏಕದಿನ, ಟಿ20 ವಿಶ್ವಕಪ್ ಗಳ ವೇಳಾಪಟ್ಟಿಗಳನ್ನೂ ಐಸಿಸಿ ಘೋಷಿಸಿದೆ. ಪುರುಷರ ಟಿ20 ವಿಶ್ವಕಪ್ ಮುಂದಿನ ವರ್ಷ