ದುಬೈ: ಮುಂದಿನ ವರ್ಷ ಅಕ್ಟೋಬರ್-ನವಂಬರ್ ಅವಧಿಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಾವಳಿಯ ವೇಳಾಪಟ್ಟಿಯನ್ನು ಐಸಿಸಿ ಪ್ರಕಟಿಸಿದೆ. ಆಸ್ಟ್ರೇಲಿಯಾದಲ್ಲಿ ಮುಂದಿನ ವರ್ಷ ಅಕ್ಟೋಬರ್ 24 ರಿಂದ ಅಧಿಕೃತವಾಗಿ ಪಂದ್ಯಾವಳಿ ಆರಂಭವಾಗಲಿದೆ. ಇದಕ್ಕೂ ಮೊದಲು ಅರ್ಹತಾ ಪಂದ್ಯಗಳು ನಡೆಯಲಿವೆ. ಆದರೆ ಟೀಂ ಇಂಡಿಯಾದಂತಹ ಘಟಾನುಘಟಿ ತಂಡಗಳಿಗೆ ಅರ್ಹತಾ ಪಂದ್ಯವಾಡಬೇಕಿಲ್ಲ.ಭಾರತಕ್ಕೆ ಮೊದಲ ಪಂದ್ಯ ಅಕ್ಟೋಬರ್ 24 ರಂದು ಪರ್ತ್ ನಲ್ಲಿ ದ.ಆಫ್ರಿಕಾ ವಿರುದ್ಧ ನಿಗದಿಯಾಗಿದೆ. ಅಕ್ಟೋಬರ್ 29 ರಂದು ಮೆಲ್ಬೋರ್ನ್ ನಲ್ಲಿ (ಎದುರಾಳಿ ತೀರ್ಮಾನವಾಗಿಲ್ಲ),