ಸಿಡ್ನಿ: ಟಿ20 ವಿಶ್ವಕಪ್ ನಲ್ಲಿ ಸಿಡ್ನಿಯಲ್ಲಿ ಪಂದ್ಯವಾಡಲು ಬಂದಿರುವ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಸರಿಯಾದ ಊಟದ ವ್ಯವಸ್ಥೆಯಾಗದೇ ಇದ್ದಿದ್ದು ಭಾರೀ ಸುದ್ದಿಯಾಗಿತ್ತು. ಇದೀಗ ಐಸಿಸಿ ವಿವಾದ ಬಗೆಹರಿಸಲು ಮುಂದಾಗಿದೆ.ಸಿಡ್ನಿಯಲ್ಲಿ ನೆಟ್ ಸೆಷನ್ ಮುಗಿಸಿದ ಕ್ರಿಕೆಟಿಗರಿಗೆ ಸರಿಯಾದ ಊಟದ ವ್ಯವಸ್ಥೆಯಿರಲಿಲ್ಲ. ಕೇವಲ ಸ್ಯಾಂಡ್ ವಿಚ್, ಹಣ್ಣು ಹಂಪಲುಗಳನ್ನು ಸೇರಿದಂತೆ ತಣ್ಣನೆಯ ಆಹಾರ ಒದಗಿಸಲಾಗಿತ್ತು. ಇದರಿಂದ ಬೇಸರಗೊಂಡ ಕ್ರಿಕೆಟಿಗರು ಹೋಟೆಲ್ ಗೆ ತೆರಳಿ ಆಹಾರ ಸೇವಿಸಿದ್ದರು. ಈ ವಿಚಾರ ಸುದ್ದಿಯಾಗುತ್ತಿದ್ದಂತೇ ವಿಶ್ವಕಪ್ ಆಯೋಜಕ ಐಸಿಸಿ