ತೆಂಡುಲ್ಕರ್ ಗಿಂತಲೂ ಬೆನ್ ಸ್ಟೋಕ್ ಶ್ರೇಷ್ಠ ಎಂದ ಐಸಿಸಿಗೆ ಟ್ವಿಟರಿಗರು ತಪರಾಕಿ

ದುಬೈ, ಬುಧವಾರ, 28 ಆಗಸ್ಟ್ 2019 (12:01 IST)

ದುಬೈ: ವಿಶ್ವಕಪ್ ಮತ್ತು ಆಶಸ್ ಟೆಸ್ಟ್ ಕ್ರಿಕೆಟ್ ನಲ್ಲಿ ಮಿಂಚಿದ ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ರನ್ನು ಕ್ರಿಕೆಟ್ ದೇವರು ಎಂದೇ ಕರೆಯಿಸಿಕೊಳ್ಳುವ ಸಚಿನ್ ತೆಂಡುಲ್ಕರ್ ಗಿಂತಲೂ ಗ್ರೇಟ್ ಎಂದ ಐಸಿಸಿಗೆ ಟ್ವಿಟರಿಗರು ತಪರಾಕಿ ನೀಡಿದ್ದಾರೆ.


 
ಸಚಿನ್ ತೆಂಡುಲ್ಕರ್ ಜತೆಗೆ ಸ್ಟೋಕ್ಸ್ ಇರುವ ಫೋಟೋವೊಂದನ್ನು ಪ್ರಕಟಿಸಿ ‘ಗ್ರೇಟೆಸ್ಟ್ ಕ್ರಿಕೆಟರ್ ಆಫ್ ಆಲ್ ಟೈಮ್ ವಿತ್ ಸಚಿನ್ ತೆಂಡುಲ್ಕರ್’ ಎಂದು ಬರೆದ ಐಸಿಸಿ ವಿಶ್ವಕಪ್ 2019 ಎಂಬ ಟ್ವಿಟರ್ ಪೇಜ್ ನ ಟ್ವೀಟ್ ಒಂದನ್ನು ಐಸಿಸಿ ರಿಟ್ವೀಟ್ ಮಾಡಿದೆ.
 
ಈ ಟ್ವೀಟ್ ಮುಖಾಂತರ ಐಸಿಸಿ ಸಚಿನ್ ಗಿಂತಲೂ ಸ್ಟೋಕ್ಸ್ ಶ್ರೇಷ್ಠ ಎಂದು ಹೇಳಿದಂತಾಗಿದೆ. ಇದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇಂತಹ ತಲೆಬುಡವಿಲ್ಲದ ಟ್ವೀಟ್ ಮಾಡುವ ಮೊದಲು ಇಬ್ಬರ ದಾಖಲೆಗಳನ್ನು ಐಸಿಸಿ ನೋಡಲಿ ಎಂದು ಕೆಲವರು ಕುಟುಕಿದರೆ ಇನ್ನು ಕೆಲವರು ನೀವು ಹೇಳಿದ ಮೂರ್ಖ ಹೇಳಿಕೆಗಳನ್ನೆಲ್ಲಾ ನಾವು ನಂಬಕ್ಕಾಗಲ್ಲ ಎಂದು ಟೀಕಿಸಿದ್ದಾರೆ. ಅಲ್ಲದೆ ಕೆಲವರು ಹಲವು ಮೆಮೆಗಳ ಮೂಲಕ ಐಸಿಸಿಗೆ ಟಾಂಗ್ ಕೊಟ್ಟಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ರವಿಶಾಸ್ತ್ರಿ ಮೆಚ್ಚಿನ ಭರತ್ ಅರುಣ್ ಗೆ ಕೋಚಿಂಗ್ ಹುದ್ದೆಯಲ್ಲಿ ಬಡ್ತಿ

ಮುಂಬೈ: ಟೀಂ ಇಂಡಿಯಾದ ಬೌಲಿಂಗ್ ಕೋಚ್ ಆಗಿ ಕೆಲಸ ಮಾಡುತ್ತಿರುವ ಭರತ್ ಅರುಣ್ಗೆ ಇದೀಗ ತಮ್ಮ ಹುದ್ದೆಯಲ್ಲಿ ...

news

ಮುಂದಿನ ಟೆಸ್ಟ್ ಗೆ ರಿಷಬ್ ಪಂತ್ ಗೆ ಕೊಕ್?!

ಆಂಟಿಗುವಾ: ಟಿ20, ಏಕದಿನ ನಂತರ ಇದೀಗ ಟೆಸ್ಟ್ ಪಂದ್ಯದಲ್ಲೂ ವಿಫಲವಾದ ಬಳಿಕ ಯುವ ವಿಕೆಟ್ ಕೀಪರ್ ರಿಷಬ್ ...

news

ಐಸಿಸಿ ಶ್ರೇಯಾಂಕದಲ್ಲಿ ಟಾಪ್ 10 ರೊಳಗೆ ಪ್ರವೇಶಿಸಿದ ಜಸ್ಪ್ರೀತ್ ಬುಮ್ರಾ, ಅಜಿಂಕ್ಯಾ ರೆಹಾನೆ

ದುಬೈ: ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಟೀಂ ಇಂಡಿಯಾ ವೇಗಿ ...

news

ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನಕ್ಕೆ ಇನ್ಮೇಲೆ ಅರುಣ್ ಜೇಟ್ಲಿ ಹೆಸರು

ನವದೆಹಲಿ: ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನಕ್ಕೆ ಬಿಜೆಪಿ ಹಿರಿಯ ನಾಯಕ, ದೆಹಲಿ ಕ್ರಿಕೆಟ್ ಸಂಸ್ಥೆಯ ...