Widgets Magazine

ಐಸಿಸಿ ಟೆಸ್ಟ್ ಶ್ರೇಯಾಂಕ: ಟಾಪ್ 10 ಪಟ್ಟಿಯಲ್ಲಿ ಭಾರತೀಯರದ್ದೇ ಸಿಂಹಪಾಲು

ದುಬೈ| Krishnaveni K| Last Modified ಬುಧವಾರ, 27 ನವೆಂಬರ್ 2019 (09:04 IST)
ದುಬೈ: ಐಸಿಸಿ ಇತ್ತೀಚೆಗಿನ ಟೆಸ್ಟ್ ರ್ಯಾಂಕಿಮಗ್ ಬಿಡುಗಡೆ ಮಾಡಿದ್ದು ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಟೀಂ ಇಂಡಿಯಾ ಆಟಗಾರರೇ ಅಗ್ರ ಸ್ಥಾನ ಪಡೆದಿದ್ದಾರೆ.

 
ದ್ವಿತೀಯ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಅಂಕ ಹೆಚ್ಚಿಸಿಕೊಂಡಿದ್ದು, ನಂ.1 ಸ್ಥಾನದಲ್ಲಿರುವ ಸ್ಟೀವ್ ಸ್ಮಿತ್ ರಿಂದ ಕೆಲವೇ ಹೆಜ್ಜೆ ದೂರದಲ್ಲಿದ್ದಾರೆ. ಇನ್ನು ಸತತ ಎರಡು ದ್ವಿಶತಕ ಸಿಡಿಸಿ ಅದ್ಭುತ ಫಾರ್ಮ್ ನಲ್ಲಿರುವ ಮಯಾಂಕ್ ಅಗರ್ವಾಲ್ ಇದೇ ಮೊದಲ ಬಾರಿಗೆ ಟಾಪ್ 10 ರೊಳಗೆ ಸ್ಥಾನ ಪಡೆದಿದ್ದು 10 ನೇ ಸ್ಥಾನದಲ್ಲಿದ್ದಾರೆ.
 
ಇವರಲ್ಲದೆ ಚೇತೇಶ್ವರ ಪೂಜಾರ, ಅಜಿಂಕ್ಯಾ ರೆಹಾನೆ ಕೂಡಾ ಟಾಪ್ 10 ರೊಳಗಿದ್ದಾರೆ. ಹೀಗಾಗಿ ಟಾಪ್ 10 ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಐವರು ಭಾರತೀಯರಿದ್ದಾರೆ. ಇನ್ನು ಬೌಲರ್ ಗಳ ಪಟ್ಟಿಯಲ್ಲಿ ಜಸ್ಪ್ರೀತ್ ಬುಮ್ರಾ ನಾಲ್ಕನೇ ಸ್ಥಾನದಲ್ಲಿದ್ದರೆ, ರವಿಚಂದ್ರನ್ ಅಶ್ವಿನ್ 9 ನೇ ಸ್ಥಾನದಲ್ಲಿದ್ದಾರೆ. ಇದು ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತೀಯ ತಂಡದ ಪಾರಮ್ಯಕ್ಕೆ ಸಾಕ್ಷಿಯಾಗಿದೆ.
ಇದರಲ್ಲಿ ಇನ್ನಷ್ಟು ಓದಿ :