Widgets Magazine

ರವಿಶಾಸ್ತ್ರಿ ಫೋಟೋವನ್ನು ಐಸಿಸಿ ಹೀಗೆ ಪ್ರಕಟಿಸಿದ್ದೇ ತಪ್ಪಾಯ್ತು!

ಮುಂಬೈ| Krishnaveni K| Last Modified ಸೋಮವಾರ, 14 ಅಕ್ಟೋಬರ್ 2019 (10:52 IST)
ಮುಂಬೈ: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಎಂದರೆ ಟ್ವಿಟರಿಗರು ಆಗಾಗ ಕಾಲೆಳೆಯುವುದು ಜಾಸ್ತಿ. ಆದರೆ ನಗುವವರ ಮುಂದೆಯೇ ಜಾರಿ ಬಿದ್ದರು ಎನ್ನುವ ಹಾಗೆ ಕಾಲೆಳೆಯುವವರಿಗೇ ರವಿಶಾಸ್ತ್ರಿಯ ಫೋಟೋ ನೀಡಿ ಇದಕ್ಕೊಂದು ಹೆಸರು ಕೊಡಿ ಎಂದರೆ ಟ್ವಿಟಿರಿಗರು ಸುಮ್ಮನಿರುತ್ತಾರೆಯೇ?

 
ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಸ್ಟ್ರೆಚಿಂಗ್ ಮಾಡುವ ಫೋಟೋ ಒಂದನ್ನು ಪ್ರಕಟಿಸಿದ ಐಸಿಸಿ ಇದಕ್ಕೊಂದು ಅಡಿಬರಹ ಕೊಡಿ ಎಂದು ಟ್ವೀಟ್ ಮಾಡಿತ್ತು. ಇಷ್ಟು ಸಿಕ್ಕರೆ ಸಾಕಲ್ಲವೇ? ಟ್ವಿಟರಿಗರು ಸುಮ್ಮನಿರುತ್ತಾರೆಯೇ?
 
ರವಿಶಾಸ್ತ್ರಿ ಫೋಟೋವನ್ನು ಟೈಟಾನಿಕ್ ಹೀರೋ ಜತೆಗೆ, ವಿರಾಟ್ ಕೊಹ್ಲಿ ಜತೆಗೆ ಫೋಟೋ ಎಡಿಟ್ ಮಾಡಿ ತಮಾಷೆ ಮಾಡಿದ್ದಾರೆ. ಇನ್ನು ಕೆಲವರು ಶಾಸ್ತ್ರಿಯನ್ನು ಹತ್ತು ತಲೆಯ ರಾವಣನಂತೆ, ಮತ್ತೆ ಕೆಲವರು ಎರಡೂ ಕೈಗಳಿಗೆ ರಮ್ ತುಂಬಿದ ಗ್ಲಾಸ್ ಹಿಡಿದುಕೊಂಡಂತೆ ಎಡಿಟ್ ಮಾಡಿ ಕಾಲೆಳೆದಿದ್ದಾರೆ. ಅಂತೂ ರವಿಶಾಸ್ತ್ರಿ ಫೋಟೋವೊಂದು ತಮಾಷೆಗೆ ಆಹಾರವಾಗಿದೆ.
ಇದರಲ್ಲಿ ಇನ್ನಷ್ಟು ಓದಿ :