ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ತೃತೀಯ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.ಇದರೊಂದಿಗೆ ಈ ಸರಣಿಯಲ್ಲಿ ಮೂರೂ ಬಾರಿಯೂ ಆಸ್ಟ್ರೇಲಿಯಾವೇ ಟಾಸ್ ಗೆದ್ದಂತಾಗಿದೆ. ಎರಡೂ ಪಂದ್ಯಗಳಲ್ಲಿ ತಲಾ ಒಂದೊಂದು ಜಯ ಗಳಿಸಿರುವ ಉಭಯ ತಂಡಗಳಿಗೆ ಇಂದು ಫೈನಲ್ ಪಂದ್ಯವಾಗಿರಲಿದೆ. ಇಂದು ಗೆದ್ದ ತಂಡ ಸರಣಿ ತನ್ನದಾಗಿಸಿಕೊಳ್ಳಲಿದೆ.ಈ ಪಂದ್ಯಕ್ಕೆ ಭಾರತ ತಂಡಕ್ಕೆ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಅದರಲ್ಲೂ ಕೆಎಲ್ ರಾಹುಲ್ ರನ್ನು