ಮೆಲ್ಬೋರ್ನ್: ಮತ್ತೆ ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯಕ್ಕೆ ವರುಣನ ಅವಕೃಪೆ ಎದುರಾಗಿದೆ. ಈ ಸರಣಿಯಾದ್ಯಂತ ಮಳೆಯಿಂದಾಗಿ ಭಾರತಕ್ಕೆ ಭಾರೀ ನಷ್ಟವಾಗಿದೆ. ಅದರ ಜತೆಗೆ ಇಂದು ಯಾರು ಗೆಲ್ಲುತ್ತಾರೋ ಅವರಿಗೆ ಸರಣಿ ಎಂಬ ಸ್ಥಿತಿಯಲ್ಲಿರುವಾಗ ಮಳೆ ಬಂದು ಸದ್ಯಕ್ಕೆ ಆಟ ಸ್ಥಗಿತಗೊಂಡಿದೆ.ಟಾಸ್ ಗೆದ್ದು ಟೀಂ ಇಂಡಿಯಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತ್ತು. ಆದರೆ ಕೇವಲ ಎರಡು ಎಸೆತ ಎಸೆಯುವಷ್ಟರಲ್ಲಿ ಮಳೆ ಹನಿಯಲು ಆರಂಭವಾಗಿದ್ದು, ಪಂದ್ಯ ಸ್ಥಗಿತಗೊಂಡಿತು.ಭಾರತ ಈ ಪಂದ್ಯಕ್ಕೆ ಭಾರೀ ಬದಲಾವಣೆಯೊಂದಿಗೆ ಕಣಕ್ಕಿಳಿದಿತ್ತು.