ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದಿನಿಂದ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದ್ದು, ಮೊದಲ ಪಂದ್ಯ ಇಂದು ಕ್ಯಾನ್ ಬೆರಾದಲ್ಲಿ ನಡೆಯಲಿದೆ. ಈಗಾಗಲೇ ಏಕದಿನ ಸರಣಿ ಸೋತಿರುವ ಟೀಂ ಇಂಡಿಯಾ ಟಿ20 ಸರಣಿ ಗೆದ್ದು ಮಾನ ಉಳಿಸಿಕೊಳ್ಳುವ ತವಕದಲ್ಲಿದೆ. ಈಗಷ್ಟೇ ಐಪಿಎಲ್ ಮುಗಿಸಿ ಬಂದಿರುವ ಕ್ರಿಕೆಟಿಗರು ಟಿ20 ಕ್ರಿಕೆಟ್ ಮೂಡ್ ನಲ್ಲಿರುವುದರಿಂದ ಏಕದಿನ ಸರಣಿಯಷ್ಟು ಹೀನಾಯ ಪ್ರದರ್ಶನ ನೀಡಲಾರರು ಎಂಬ ವಿಶ್ವಾಸವಿದೆ. ಅಂತಿಮ ಏಕದಿನ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ