ಭಾರತ-ಆಸೀಸ್ ಟೆಸ್ಟ್: ಮಳೆಯಿಂದಾಗಿ ಪಂದ್ಯ ಸ್ಥಗಿತ

ಬ್ರಿಸ್ಬೇನ್| Krishnaveni K| Last Modified ಶನಿವಾರ, 16 ಜನವರಿ 2021 (10:52 IST)
ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಮಳೆಯಿಂದಾಗಿ ಕೆಲವು ಕಾಲ ಸ್ಥಗಿತಗೊಂಡಿದೆ.

 
ಇದಕ್ಕೂ ಮೊದಲು ಭಾರತ 2 ವಿಕೆಟ್ ಕಳೆದುಕೊಂಡು 62 ರನ್ ಗಳಿಸಿತ್ತು. ಚೇತೇಶ್ವರ ಪೂಜಾರ 49 ಎಸೆತಗಳಿಂದ 8 ರನ್ ಮತ್ತು ನಾಯಕ ಅಜಿಂಕ್ಯಾ ರೆಹಾನೆ 19 ಎಸೆತಗಳಿಂದ 2 ರನ್ ಗಳಿಸಿ ಕ್ರೀಸ್ ನಲ್ಲಿದ್ದರು. ಭಾರತ ಆಸ್ಟ್ರೇಲಿಯಾದ ಮೊದಲ ಇನಿಂಗ್ಸ್ ಮೊತ್ತ ದಾಟಲು ಇನ್ನೂ 307 ರನ್ ಗಳಿಸಬೇಕು.
ಇದರಲ್ಲಿ ಇನ್ನಷ್ಟು ಓದಿ :