ಮುಂಬೈ: ಸಾಮಾನ್ಯವಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಟೆಸ್ಟ್ ಸರಣಿ ಮೆಲ್ಬೋರ್ನ್ ಮೈದಾನದಲ್ಲಿ ನಡೆಯುತ್ತದೆ. ಆದರೆ ಈ ಬಾರಿ ಕೊರೋನಾ ಅದನ್ನೆಲ್ಲಾ ತಪ್ಪಿಸುವ ಸಾಧ್ಯತೆಯಿದೆ.ಕೊರೋನಾ ಕಾರಣದಿಂದ ಟೆಸ್ಟ್ ಸರಣಿಯನ್ನು ಅಡಿಲೇಡ್ ಅಥವಾ ಪರ್ತ್ ಗೆ ಸ್ಥಳಾಂತರಿಸಬಹುದು ಎಂಬ ಸುದ್ದಿಯಿತ್ತು. ಅದೀಗ ನಿಜವಾಗುವ ಲಕ್ಷಣ ತೋರುತ್ತಿದೆ.ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಪಿಚ್ ಸಿದ್ಧಗೊಳಿಸಲಾಗುತ್ತಿದ್ದು, ಇಲ್ಲಿಯೇ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಗಳು ನಡೆಯಬಹುದು ಎನ್ನಲಾಗಿದೆ.