ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇದುವರೆಗೆ ನಡೆದ ಎರಡು ಟಿ20 ಪಂದ್ಯಗಳಲ್ಲೂ ಮಳೆಯದ್ದೇ ಕಾರುಬಾರು. ಇದರಿಂದಾಗಿ ಅನ್ಯಾಯವಾಗಿರುವುದು ಮಾತ್ರ ಭಾರತಕ್ಕೆ.ಇಂದು ಮೂರನೇ ಪಂದ್ಯ ಸಿಡ್ನಿಯಲ್ಲಿ ನಡೆಯಲಿದ್ದು, ಮತ್ತೆ ಮಳೆ ಬಂದರೆ ಟೀಂ ಇಂಡಿಯಾ ಸರಣಿ ಕಳೆದುಕೊಳ್ಳಬೇಕಾಗುತ್ತದೆ. ಈಗಾಗಲೇ ಡಕ್ ವರ್ತ್ ಲೂಯಿಸ್ ನಿಯಮದ ಕೃಪೆಯಿಂದಾಗಿ ಆಸೀಸ್ ಮೊದಲ ಪಂದ್ಯವನ್ನು ಗೆದ್ದಿದೆ.ದ್ವಿತೀಯ ಪಂದ್ಯ ಸಂಪೂರ್ಣವಾಗಿ ರದ್ದಾಗಿತ್ತು. ಇದರಿಂದಾಗಿ ಟೀಂ ಇಂಡಿಯಾಕ್ಕೆ ಸತತ ಏಳು ಟಿ20 ಸರಣಿ ಗೆಲುವಿನ ಸರಪಳಿ ಕಳಚಿತ್ತು.