ಕೋಲ್ಕೊತ್ತಾ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನವಂಬರ್ 22 ರಂದು ನಡೆಯಲಿರುವ ಹಗಲು-ರಾತ್ರಿ ಟೆಸ್ಟ್ ಪಂದ್ಯದ ಉದ್ದೇಶ ಜನರನ್ನು ಟೆಸ್ಟ್ ಕ್ರಿಕೆಟ್ ನತ್ತ ಹೆಚ್ಚು ಆಕರ್ಷಿತರಾಗುವಂತೆ ಮಾಡುವುದು.ಆ ಉದ್ದೇಶದಲ್ಲಿ ಬಿಸಿಸಿಐ ಬಹುತೇಕ ಯಶಸ್ವಿಯಾಗಿದೆ. ಈ ಪಂದ್ಯ ಭಾರತದ ಕ್ರಿಕೆಟ್ ಕಾಶಿ ಎಂದೇ ಕರೆಯಿಸಿಕೊಳ್ಳುವ ಕೋಲ್ಕೊತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿದ್ದು, ಈಗಾಗಲೇ ಟಿಕೆಟ್ ಗಳು ಬಹುತೇಕ ಬಿಕರಿಯಾಗಿವೆ ಎಂಬ ಸುದ್ದಿ ಬಂದಿದೆ.ಮೂಲಗಳ ಪ್ರಕಾರ 50000 ಪ್ರೇಕ್ಷಕರ ಆಸನದ ವ್ಯವಸ್ಥೆ ಹೊಂದಿರುವ