ಪುಣೆ: ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ್ದಾಯ್ತು. ಇದೀಗ ಏಕದಿನ ಸರಣಿಯಲ್ಲಿ ಕಾದಾಡಲು ಭಾರತ-ಇಂಗ್ಲೆಂಡ್ ಸಜ್ಜಾಗಿವೆ. ಅದಕ್ಕಾಗಿ ವೇದಿಕೆಯೂ ಸಿದ್ಧಗೊಂಡಿದೆ.ಎಲ್ಲರ ಚಿತ್ರ ಇದೀಗ ವಿರಾಟ್ ಕೊಹ್ಲಿಯತ್ತ ನೆಟ್ಟಿದೆ. ಇದು ಅವರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ಮೊದಲ ಪಂದ್ಯ. ಅಲ್ಲದೆ ಇದುವರೆಗೆ ನಾಯಕತ್ವ ವಹಿಸಿದ್ದ ಧೋನಿ ಈ ಪಂದ್ಯದಲ್ಲಿ ಸಾಮಾನ್ಯ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ. ಪಂದ್ಯಕ್ಕೆ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಈಗಾಗಲೇ ಕೊಹ್ಲಿ ಪಂದ್ಯದ ನಡುವೆ ಧೋನಿ ಸಲಹೆ ಪಡೆಯುವುದಾಗಿ ಹೇಳಿದ್ದಾರೆ.ಹಿರಿಯ ಆಟಗಾರರಾದ