ಮ್ಯಾಂಚೆಸ್ಟರ್: ಟೀಂ ಇಂಡಿಯಾ ಫಿಸಿಯೋ ಯೋಗೇಶ್ ಪರ್ಮಾರ್ ಗೆ ನಿನ್ನೆಯಷ್ಟೇ ಕೊರೋನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಇಂದು ನಡೆಯಬೇಕಿರುವ ಐದನೇ ಟೆಸ್ಟ್ ಪಂದ್ಯ ನಡೆಯುವುದು ಅನುಮಾನ ಎಂಬ ವರದಿಯಾಗಿತ್ತು.ಆದರೆ ಈಗ ಕ್ರಿಕೆಟಿಗರೆಲ್ಲರ ಕೊರೋನಾ ವರದಿ ನೆಗೆಟಿವ್ ಬಂದಿದ್ದು, ನಿಗದಿಯಂತೇ ಇಂದು ಟೆಸ್ಟ್ ಪಂದ್ಯ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.ಒಂದು ವೇಳೆ ಕ್ರಿಕೆಟಿಗರಲ್ಲಿ ಯಾರಾದಾರೂ ಕೊರೋನಾ ಸೋಂಕಿತರಾಗಿದ್ದರೆ ಪಂದ್ಯ ರದ್ದಾಗುತ್ತಿತ್ತು. ಆದರೆ ಸದ್ಯಕ್ಕೆ ಆ ಅಪಾಯವಿಲ್ಲ. ನಿನ್ನೆ ಟೀಂ ಇಂಡಿಯಾ ಕೊರೋನಾ