ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಇಂದಿನಿಂದ ಇಂಗ್ಲೆಂಡ್ ನ ದಿ ಓವಲ್ ಮೈದಾನದಲ್ಲಿ ಆರಂಭವಾಗಲಿದೆ.ಈಗಾಗಲೇ ಸರಣಿಯಲ್ಲಿ ಎರಡೂ ತಂಡಗಳು ಒಂದು ಡ್ರಾ, ತಲಾ ಒಂದು ಗೆಲುವಿನೊಂದಿಗೆ ಸರಣಿ ಸಮಬಲಗೊಳಿಸಿವೆ. ಎರಡನೇ ಪಂದ್ಯವನ್ನು ಭಾರತ ಗೆದ್ದಿದ್ದರೆ, ಮೂರನೇ ಪಂದ್ಯದಲ್ಲಿ ಹೀನಾಯ ಸೋಲು ಕಂಡಿತ್ತು.ಹೀಗಾಗಿ ಈ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಸಣ್ಣ ಮಟ್ಟಿಗಿನ ಬದಲಾವಣೆ ನಿರೀಕ್ಷಿಸಬಹುದು. ಬ್ಯಾಟಿಂಗ್ ನಲ್ಲಿ ಅಂತಹ ಬದಲಾವಣೆಯಿರದು. ಆದರೆ ಬೌಲಿಂಗ್ ವಿಭಾಗದಲ್ಲಿ ಜಡೇಜಾ