ಆಸ್ಟ್ರೇಲಿಯಾ ವಿರುದ್ಧದ ಎರಡು ಏಕದಿನ ಪಂದ್ಯಗಳನ್ನ ಗೆದ್ದು ಐಸಿಸಿ ಶ್ರೇಯಾಂಕದಲ್ಲಿ ಮೇಲೇರಿರುವ ಟೀಮ್ ಇಂಡಿಯಾ ಇವತ್ತು 3ನೇ ಏಕದಿನ ಪಂದ್ಯವನ್ನಾಡುತ್ತಿದೆ. ಈ ಪಂದ್ಯವನ್ನೂ ಗೆದ್ದು ಸರಣಿ ಕೈವಶ ಮಾಡಿಕೊಳ್ಳಲು ಕೊಹ್ಲಿ ಪಡೆ ಹವಣಿಸುತ್ತಿದ್ದರೆ ಆಸೀಸ್ ಆಟಗಾರರಿಗೆ ಇದು ಡು ಆರ್ ಡೈ ಪಂದ್ಯವಾಗಿದೆ. ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಪ್ರಬಲವಾಗಿರುವ ಟೀಮ್ ಇಂಡಿಯಾ ಗೆಲ್ಲುವ ಫೇವರಿಟ್ ತಂಡವಾಗಿದ್ದರೆ, ಬ್ಯಾಟಿಂಗ್, ಫೀಲ್ಡಿಂಗ್ ತಪ್ಪುಗಳನ್ನ ತದ್ದಿಕೊಂಡು ಆಸಿಸ್ ಕಣಕ್ಕಿಳಿಯಬೇಕಿದೆ. ಇಂಧೋರ್`ನಲ್ಲಿ ನಡೆಯಲಿರುವ ಈ ಪಂದ್ಯ