ದುಬೈ: ಏಷ್ಯಾ ಕಪ್ ಕ್ರಿಕೆಟ್ ನ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಹಾಂಗ್ ಕಾಂಗ್ ವಿರುದ್ಧ ಪಂದ್ಯವಾಡಲಿದೆ.ಮೊದಲ ಪಂದ್ಯದಲ್ಲಿ ಪ್ರಬಲ ಪಾಕಿಸ್ತಾನವನ್ನು 5 ವಿಕೆಟ್ ಗಳಿಂದ ರೋಚಕವಾಗಿ ಗೆದ್ದುಕೊಂಡಿದ್ದ ಭಾರತಕ್ಕೆ ಈ ಪಂದ್ಯದಲ್ಲಿ ದುರ್ಬಲ ಎದುರಾಳಿ ಹಾಂಗ್ ಕಾಂಗ್ ನ್ನು ಎದುರಿಸಬೇಕಿದೆ.ಈ ಪಂದ್ಯದಲ್ಲಿ ಭಾರತ ಮುಂದಿನ ಮಹತ್ವದ ಪಂದ್ಯಗಳನ್ನು ಗಮನದಲ್ಲಿಟ್ಟುಕೊಂಡು ಕೀ ಆಟಗಾರರಿಗೆ ವಿಶ್ರಾಂತಿ ನೀಡಿದರೂ ಅಚ್ಚರಿಯಿಲ್ಲ. ಟೀಂ ಇಂಡಿಯಾಕ್ಕೆ ಎಲ್ಲಕ್ಕಿಂತ ಮುಖ್ಯವಾಗಿ ಆರಂಭಿಕರಾದ ರೋಹಿತ್-ಕೆಎಲ್ ರಾಹುಲ್ ಸಿಡಿಯಬೇಕಾದ ಅನಿವಾರ್ಯತೆಯಿದೆ.