ಡುಬ್ಲಿನ್: ಭಾರತ ಮತ್ತು ಐರ್ಲೆಂಡ್ ನಡುವೆ ಇಂದು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಕೊನೆಯ ಟಿ20 ಪಂದ್ಯ ನಡೆಯಲಿದೆ.ಈಗಾಗಲೇ ಭಾರತ 2-0 ಅಂತರದಿಂದ ಸರಣಿ ಮುನ್ನಡೆಯಲ್ಲಿರುವುದರಿಂದ ಈ ಪಂದ್ಯ ಕೇವಲ ಔಪಚಾರಿಕವಾಗಿದೆ. ಹೀಗಾಗಿ ಬುಮ್ರಾ ಪಡೆ ಇಂದು ತಮ್ಮ ಬೆಂಚ್ ಸ್ಟ್ರೆಂಗ್ತ್ ಪರೀಕ್ಷೆಗೆ ಮುಂದಾಗಬಹುದು.ಈ ಸರಣಿಯಲ್ಲಿ ಇದುವರೆಗೆ ಆವೇಶ್ ಖಾನ್, ಜಿತೇಶ್ ಶರ್ಮ, ಶಹಬಾಜ್ ಅಹಮ್ಮದ್ ಗೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ಇಂದು ಈ ಮೂವರಲ್ಲಿ ಒಬ್ಬರಿಗಾದರೂ ಅವಕಾಶ ಸಿಗಬಹುದು.