ಕೊರೋನಾದಿಂದಾಗಿ ಭಾರತಕ್ಕೆ ಟಿ20 ವಿಶ್ವಕಪ್ ಆತಿಥ್ಯ ಭಾಗ್ಯವೂ ಇಲ್ಲ?!

ಮುಂಬೈ| Krishnaveni K| Last Modified ಗುರುವಾರ, 8 ಏಪ್ರಿಲ್ 2021 (09:14 IST)
ಮುಂಬೈ: ಕೊರೋನಾ ಎರಡನೇ ಅಲೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಭಾರತಕ್ಕೆ ಮುಂಬರುವ ಟಿ20 ವಿಶ್ವಕಪ್ ಆತಿಥ್ಯ ಕೈತಪ್ಪುವ ಭೀತಿ ಎದುರಾಗಿದೆ.

 
ಈಗಾಗಲೇ ಐಸಿಸಿ ಸಿಇಒ ಜೆಫ್ ಅಲಾರ್ಡೈಸ್ ನಾವು ಇನ್ನೊಂದು ತಾಣವನ್ನೂ ಆಯ್ಕೆಯಾಗಿ ಇಟ್ಟುಕೊಳ್ಳುತ್ತೇವೆ ಎಂದಿದ್ದಾರೆ. ಆದರೆ ಸದ್ಯಕ್ಕೆ ಆತಿಥ್ಯ ಬದಲಾಯಿಸುವ ಚಿಂತನೆಯಿಲ್ಲ ಎಂದೂ ಹೇಳಿದ್ದಾರೆ.
 
ಈಗಾಗಲೇ ಐಪಿಎಲ್ 14 ಆಯೋಜಿಸಲು ಹೊರಟಿರುವ ಆರಂಭದಲ್ಲೇ ಕೊರೋನಾಘಾತದ ಸುದ್ದಿ ಚಿಂತೆಗೆ ಕಾರಣವಾಗಿದೆ. ಒಂದೊಂದೇ ತಂಡದ ಕ್ರಿಕೆಟಿಗರು, ಸಹಾಯಕ ಸಿಬ್ಬಂದಿಗಳು, ಮೈದಾನ ಸಿಬ್ಬಂದಿಗಳಲ್ಲಿ ಕೊರೋನಾ ಕಾಣಿಸಿಕೊಳ್ಳುತ್ತಿರುವುದು ಚಿಂತೆಯ ವಿಷಯವಾಗಿದೆ. ಒಂದು ವೇಳೆ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಟಿ20 ವಿಶ್ವಕಪ್ ಭಾರತದಲ್ಲಿ ನಡೆಯುವುದು ಅನುಮಾವಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :