ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇಂದು ನಾಲ್ಕನೇ ಟಿ20 ಪಂದ್ಯ ವೆಲ್ಲಿಂಗ್ಟನ್ ನ ವೆಸ್ಟ್ ಪ್ಯಾಕ್ ಮೈದಾನದಲ್ಲಿ ನಡೆಯಲಿದೆ. ಈಗಾಗಲೇ ಭಾರತ ಸರಣಿ ಗೆದ್ದಿರುವುದರಿಂದ ಉಳಿದೆರಡು ಪಂದ್ಯಗಳು ಔಪಚಾರಿಕವೆನಿಸಲಿದೆ.ಸರಣಿಯಲ್ಲಿ ಇದುವರೆಗೆ ಒಂದೂ ಪಂದ್ಯ ಗೆಲ್ಲದ ಅತಿಥೇಯ ತಂಡ ಪ್ರತಿಷ್ಠೆ ಉಳಿಸುವ ಸಲುವಾಗಿ ಉಳಿದೆರಡು ಪಂದ್ಯಗಳನ್ನು ಗೆಲ್ಲಲು ಪ್ರಯತ್ನ ನಡೆಸಲಿದೆ. ಕಳೆದ ಪಂದ್ಯದಲ್ಲಿ ದುರಾದೃಷ್ಟವಶಾತ್ ನ್ಯೂಜಿಲೆಂಡ್ ಸೂಪರ್ ಓವರ್ ನಲ್ಲಿ ಸೋಲಬೇಕಾಯಿತು. ಆದರೆ ಉಳಿದಂತೆ ಅತಿಥೇಯರ ಪ್ರದರ್ಶನ ಉತ್ತಮವಾಗಿತ್ತು.ಈಗಾಗಲೇ ವಿರಾಟ್