ನೇಪಿಯರ್: ಸಾಮಾನ್ಯವಾಗಿ ಕ್ರಿಕೆಟ್ ಪಂದ್ಯಗಳು ಮಳೆ, ಮಂದ ಬೆಳಕಿನ ಕಾರಣದಿಂದ ನಿಲ್ಲುತ್ತವೆ. ಆದರೆ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯ ಸೂರ್ಯನ ಬಿಸಿಲಿನಿಂದಾಗಿ ನಿಂತಿತು.ಊಟದ ವಿರಾಮದ ಬಳಿಕ ಭಾರತ ಎರಡನೇ ಓವರ್ ಆಡುವಷ್ಟರಲ್ಲಿ ಶಿಖರ್ ಧವನ್ ಬಿಸಿಲಿನ ಝಳಕ್ಕೆ ಬಾಲ್ ಕಾಣಿಸುತ್ತಿಲ್ಲ ಎಂದು ಅಂಪಾಯರ್ ಗೆ ದೂರಿತ್ತರು. ಇದರಿಂದಾಗಿ ಅಂಪಾಯರ್ ಗಳು ಪಂದ್ಯವನ್ನು ಕೆಲ ಕಾಲ ಸ್ಥಗಿತಗೊಳಿಸಲು ತೀರ್ಮಾನಿಸಿದರು.ಆ ಸಮಯದಲ್ಲಿ ಬ್ಯಾಟ್ಸ್ ಮನ್ ನ ಕಣ್ಣಿಗೆ ನೇರವಾಗಿ